ಇಟಗಿ ಶ್ರೀ ನಾಗಚೌಡೇಶ್ವರಿ ಕ್ಷೇತ್ರದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ
ಅಕ್ಷರಕ್ರಾಂತಿ ನ್ಯೂಸ್
ಕುಕನೂರು,: ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ ಕುಕನೂರು ತಾಲೂಕಿನ ಇಟಗಿ ಗ್ರಾಮದಲ್ಲಿ ಶ್ರೀಕ್ರೋಧಿ ನಾಮ ಸಂವತ್ಸರ, ಭಾದ್ರಪದ ಮಾಸೆೆ, ವರ್ಷ ಋತು, ದಕ್ಷಿಣಾಯಣ ಕೃಷ್ಣ ಪಕ್ಷ, ಅಕ್ಟೋಬರ್ 02 ಬುಧವಾರ ದಂದು “ಮಹಾಲಯ ಅಮಾವಾಸ್ಯೆ ಪೂಜೆ”ಗೆ, ಬೆಳಿಗ್ಗೆ 11ಕ್ಕೆ ಪೂಜೆ ಹಮ್ಮಿಕೊಳ್ಳಲಾಗಿದೆ. ಅಮ್ಮನವರ ದರ್ಶನವು ಸಂಜೆ 5 ಗಂಟೆಗೆಯವರೆಗೆ ದೇಗುಲ ತೆರೆದಿರುತ್ತದೆ.
ಭಕ್ತಾದಿಗಳು ಸಹ-ಕುಟುಂಬ ಸಮೇತ ಆಗಮಿಸಿ, ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಎಂದು ಕ್ಷೇತ್ರದ ಉಸ್ತುವಾರಿ ರಮೇಶ ಸುರ್ವೆ ವಿನಂತಿಸಿಕೊಳ್ಳುತ್ತೇವೆ. ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಮತ್ತು ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು, ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿ, ನಂ. 468, 13ನೇ ಮುಖ್ಯರಸ್ತೆ, 3ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸ್ತೆ, ಮಂಜುನಾಥನಗರ, ಬೆಂಗಳೂರು-560010. ಮೊಬೈಲ್ : 9845307327 ನಂಬರ್ಗೆ ಸಂಪರ್ಕಿಸಬಹುದು.
ವಿಶೇಷ ಸೂಚನೆ : ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ. ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬೇಕೆಂದು ವಿನಂತಿಸುತ್ತೇನೆ. ಕಡ್ಡಾಯವಾಗಿ ಒಳಗಡೆ ಕಟ್ಟೆ ಹತ್ತಿ ಹೋಗಬಾರದೆಂದು ಮನವಿ ಮಾಡುತ್ತೇನೆ.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ