ಶಿರಡಿ ಸಾಯಿಬಾಬಾ ರವರ 189ನೇ ಹುಟ್ಟುಹಬ್ಬ | ವಿಷೇಶ ಪೂಜೆ, ಪ್ರಸಾದ ಸೇವೆ
ಅಕ್ಷರಕ್ರಾಂತಿ ನ್ಯೂಸ್
ಕುಕನೂರು,: ಪಟ್ಟಣದ ಶಿರಡಿ ಸಾಯಿ ಸೇವಾಶ್ರಮ ಟ್ರಸ್ಟ್ ವತಿಯಿಂದ ಶ್ರೀ ಶಿರಡಿ ಸಾಯಿಬಾಬಾ ಅವರ 189ನೇ ಹುಟ್ಟುಹಬ್ಬವನ್ನು ಇದೇ ಸೆ.28 ಶನಿವಾರ ರಂದು ಸರ್ವ ಭಕ್ತಾಧಿಗಳ ಮಧ್ಯೆ ನೆರವೇರಿಸಲಾಗುವುದು ಎಂದು ವ್ಯವಸ್ಥಾಪಕರಾದ ಅಮ್ಮುಲ ಸಾಂಬಶಿವರಾವ್ ತಿಳಿಸಿದ್ದಾರೆ.
189ನೇ ಶ್ರೀ ಸಾಯಿಬಾಬಾ ರವರ ಹುಟ್ಟು ಹಬ್ಬದ ನಿಮಿತ್ತ ಸಾಯಿಯವರ ಮೂರ್ತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಬೆಳಗ್ಗೆ 5.15ಕ್ಕೆ ಕಾಕಡಾರತಿ, 6 ಗಂಟೆಗೆ ಸುಪ್ರಭಾತ, 7ಗಂಟೆಗೆ ಅಭಿಷೇಕ, 8 ಗಂಟೆಗೆ ಬಾಬಾ ಅವರ ವಿರಾಟ ಸಾಯಿ ಸ್ತೋತ್ರ ಪಠಣ ಮತ್ತು ನಿತ್ಯದ ಪ್ರಾರ್ಥನೆಗಳು ನೆರವೇರುವವು.ಮಧ್ಯಾಹ್ನ 12 ಗಂಟೆಗೆ ಆರತಿ ನಂತರ ಕೆಕ್ ಕತ್ತರಿಸುವ ಮೂಲಕ ಬಾಬಾ ರವರ ಹುಟ್ಟು ಹಬ್ಬ ಆಚರಣೆ, ಒಂದು ಗಂಟೆಗೆ ಅನ್ನ ಸಂತರ್ಪಣೆ ನಡೆಯುವದು.
ಸಂಜೆ 6.15ಕ್ಕೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವದು ಆದ್ದರಿಂದ ಈ ಕಾರ್ಯಕ್ರಮದಲ್ಲಿ ಸರ್ವ ಭಕ್ತಾಧಿಗಳು ಪಾಲ್ಗೋಂಡು ಶಿರಡಿ ಸಾಯಿ ಬಾಬಾರವರ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ