December 23, 2024

AKSHARA KRAANTI

AKSHARA KRAANTI




ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ಸಚಿವ ಮಧು ಬಂಗಾರಪ್ಪ

ಕುಕನೂರು,: ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ ಸರಕಾರದಿಂದ ವಿದ್ಯಾರ್ಥಿಗಳ ಶಿಕ್ಷಣ ಗುಣ ಮಟ್ಟಕ್ಕೆ ಹಲವಾರು ಉಚಿತ ಯೋಜನೆಗಳನ್ನು ನೀಡುತ್ತಿದ್ದು ಅವುಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.

ಕುಕನೂರು ತಾಲೂಕಿನ ಕೋಮಲಾಪೂರ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರಕಾರಿ ಶಾಲೆಗೆ ಉತ್ತಮ ಶಿಕ್ಷಕರನ್ನು ಸರಕಾರವೇ ನೇಮಕ ಮಾಡಿಕೊಳ್ಳುವದರಿಂದ ಅವರು ಗುಣ ಮಟ್ಟದ ಶಿಕ್ಷಣ ನೀಡುತ್ತಾರೆ. ಪಾಲಕರ ತಪ್ಪು ಕಲ್ಪನೆಯಿಂದ ಖಾಸಗಿ ಶಿಕ್ಷಣದತ್ತ ಒಲವು ತೋರಿಸಬಾರದು ಎಂದರು.
ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಇದೆ, ಈ ಮೊದಲು ಬೊಮ್ಮಾಯಿ ಸರಕಾರದಲ್ಲಿ 53 ಸಾವಿರ ಅತಿಥಿ ಶಿಕ್ಷಕರ ಕೊರತೆ ಇತ್ತು ಆದರೆ ಮೂರೂವರೆ ವರ್ಷದಲ್ಲಿ ಕೇವಲ 4900 ಶಿಕ್ಷಕರನ್ನು ನೇಮಕ ಮಾಡಿಕೊಂಡರು, ಆದರೆ ನಾನು ಸಚಿವರಾದ ಮೇಲೆ ಹದಿಮೂರುವರೆ ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಂಡಿದ್ದೇವೆ. ಇನ್ನೂ ಮುಂದಿನ ದಿನಗಳಲ್ಲಿ ಹತ್ತರಿಂದ ಹನ್ನೆರಡು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತೇವೆ ಎಂದರು.

ಎಲ್ ಕೆ ಜಿ, ಯುಕೆಜಿಗಳನ್ನು ಬಂದ್ ಮಾಡಿ ಪ್ರಾಥಮಿಕ ಶಾಲೆಗೆ ಸೇರಿಸುತ್ತೇವೆ ಎಂದಿದ್ದು, ಯಾವುದೇ ಕಾರಣಕ್ಕೂ ಅಂಗನವಾಡಿಯನ್ನು ಬಂದ್ ಮಾಡುವುದಿಲ್ಲ, ಅಂಗನವಾಡಿ ಶಿಕ್ಷಕಿಯರು ಭಯ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು. ಒಟ್ಟಾರೇ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಹತ್ವ ನೀಡಿದ್ದು ಇನ್ನೂ ಉನ್ನತ ಶಿಕ್ಷಣ ನೀಡುವ ಗುರಿಹೊಂದಿದೆ. ನಿಟ್ ಕ್ಲಾಸ್, ಸಿಇಟಿ ಕ್ಲಾಸ್ ಗಳನ್ನು ಸರಕಾರದಿಂದ ಉಚಿತವಾಗಿ ಮಾಡಲು ತಿರ್ಮಾನಿಸಲಾಗಿದೆ ಎಂದರು.
ಅಭಿವೃದ್ದಿ ಸಹಿಸದ ಬಿಜೆಪಿಯವರು ಅನಗತ್ಯ ಟೀಕೆ ಮಾಡ್ತಾ ಇದ್ದಾರೆ ಬಿಜೆಪಿ ಅವರಿಗೆ ತಪ್ಪುಹುಡುಕುವುದೇ ದೊಡ್ಡ ಕೆಲಸ ಮಾಡಿಕೊಂಡಿದ್ದಾರೆ ಎಂದರು.

ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ಬಂಗಾರಪ್ಪನವರು ನಮ್ಮ ರಾಜಕೀಯ ಗುರು ಇವರ ಆಡಳಿತಾವಧಿಯಲ್ಲಿ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಯೋಜನೆ ನೀಡಿದ್ದು ಅದು ಇಂದಿಗೂ ಪ್ರಸ್ತುತವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದ್ದು, ಅನ್ನಬಾಗ್ಯ, ಸ್ತ್ರೀ ಶಕ್ತಿ , ಗೃಹ ಲಕ್ಷ್ಮೀ, ಉಚಿತ ವಿದ್ಯುತ್ ಯೋಜನೆಯಂತಹ ಮಹತ್ತರ ಜನಪರ ಯೋಜನೆಗಳನ್ನು ಸರಕಾರ ನೀಡುತ್ತಿದೆ. ದಕ್ಷ ಆಡಳಿತ ನೀಡುವಲ್ಲಿ ಸರಕಾರ ಕೆಲಸ ಮಾಡಬೇಕು, ಕೇವಲ ಟೀಕೆ, ಟಿಪ್ಪಣೆ ಮಾಡುವುದು ಸರಿಯಲ್ಲ, ಕ್ಷೇತ್ರಕ್ಕೆ ಇನ್ನೂ 12 ಸರಕಾರಿ ಪ್ರೌಢಶಾಲೆ, 5 ಜೂನಿಯರ್ ಕಾಲೇಜು, 3 ಹೊಸ ಮೊರಾರ್ಜಿ, ಇಟಗಿ ಕಾಮರ್ಸ್, ಸೈನ್ಸ್ ಕಾಲೇಜ್ ಮಂಜೂರಾಗಿವೆ ಎಂದರು.
ಈ ಸಂದರ್ಭದಲ್ಲಿ ಏ.ಸಿ. ಮಹೇಶ್ ಮಾಲಗಿತ್ತಿ, ತಹಶೀಲ್ದಾರ್ ಪ್ರಾಣೇಶ್, ಬಸವರಾಜ್ ತೆನ್ನಳ್ಳಿ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿರಾದರ್, ವಕೀಲ ರಾಮಣ್ಣ ಸಾಲಭಾವಿ, ಭಾನಾಪೂರ ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಮಾಜಿ ಅಧ್ಯಕ್ಷ ಭೀಮಣ್ಣ, ತಳಕಲ್ ಪಂಚಾಯಿತಿ ಅಧ್ಕಕ್ಷೆ ಜಹೀರಾಬೇಗಂ ಜಾಕಿರ್ ಹುಸೇನ್ ಕೊಪ್ಪಳ, ಮೈಲಾರಗೌಡ ಹೊಸ್ಮನಿ, ಕ್ಷೇತ್ರ ಶಿಕ್ಷಣಧಿಕಾರಿ ಕೆ.ಟಿ. ನಿಂಗಪ್ಪ, ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ. ಕಳ್ಳಿ ಮುಖ್ಯೋಪಾಧ್ಯಾಯ ಮಂಜುನಾಥ ಸೇರಿದಂತೆ ಅನೇಕರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!