ಕುಕನೂರು,: ಜಾತಿ, ಮತ, ಪಂಥಗಳಿಂದಾಚೆಗೆ ಸರ್ವ ಜಿವಾತ್ಮರು ಆರಾಧಿಸಿ ಪೂಜಿಸಲ್ಪಡುವ ಜಗತ್ತಿನ ಏಕೈಕ ದೇವನೆಂದರೇ ಅದು ವಿಘ್ನೇಶ್ವರನು ಮಾತ್ರ ಎಂದು ಮಹೇಶ ಹಿರೇಮನಿ ಹೇಳಿದರು.
ಶನಿವಾರ ತಾಲೂಕಿನ ಇಟಗಿ ಗ್ರಾಮದ ಅಂಬೇಡ್ಕರ್ ನಗರದ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಿದ ವಿಘ್ನೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮವು ಚಾಲುಕ್ಯ ವಿಕ್ರಮಾದಿತ್ಯನ ಕಾಲದ ಇತಿಹಾಸವನ್ನು ಒಳಗೊಂಡ ಗ್ರಾಮವಾಗಿದ್ದು, ಇಲ್ಲಿ ಇತಿಹಾಸವನ್ನೊಳಗೊಂಡ ಮಹೇಶ್ವರ ದೇವಾಲಯವಿದೆ. ಇಲ್ಲಿ ಎಲ್ಲಾ ಸಮುದಾಯದವರು ಇದ್ದರು ಒಂದೇ ಕುಟುಂಬದವರಂತೆ ಎಲ್ಲಾ ಹಬ್ಬ ಹರಿದಿನಗಳನ್ನು ಸಂಭ್ರಮದಿಂದ ಆಚರಣೆ ಮಾಡುತ್ತೇವೆ. ಗಣೇಶನ ಹಬ್ಬದಂದು ವಿಷೇಶವಾಗಿ ಗ್ರಾಮದಲ್ಲಿ ಹಲವಾರು ಕಡೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿರುತ್ತದೆ, ಆದರೆ ಎಲ್ಲರೂ ಎಲ್ಲಾ ಕಡೆಗಳಲ್ಲೂ ಭಾಗಿಯಾಗಿ ಅತಿ ವೈಭವದಿಂದ ಹಬ್ಬ ಆಚರಣೆ ಮಾಡಿ ಅನ್ನ ಸಂತಪ್ರಣೆಯಂತಹ ಕಾರ್ಯಕ್ರಮಗಳನ್ನು ನಡೆಸುತ್ತೇವೆ ಎಂದರು.ಇನ್ನೂ ಗಣೇಶ ಪ್ರತಿಷ್ಠಾಪಿಸಿದ ವಿವಿಧ ಸಂಘಟನೆಗಳಲ್ಲಿ ಮನೋರಂಜನೆ ಹಾಗೂ ಸ್ಪರ್ಧೆಗಳನ್ನು ಆಯೋಜಿಸಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ವಿಸರ್ಜನೆ ಮಾಡುತ್ತೇವೆ ಇದುವೇ ನಮ್ಮ ಗ್ರಾಮದವರ ಹೆಮ್ಮೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ವಿವಿಧ ಮುಖಂಡರು, ಯುವಕರು ಇದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ