December 23, 2024

AKSHARA KRAANTI

AKSHARA KRAANTI




ಶ್ರೀಧರ್ಮಸ್ಥಳ ಮಂಜುನಾಥ ಧರ್ಮಾಧಿಕಾರಿಗಳಿಂದ ಇಟಗಿ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆ ಧನ ಸಹಾಯ

ಕುಕನೂರ-ಇಟಗಿ,: ತಾಲೂಕಿನ ಇಟಗಿ ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ್ ಧರ್ಮಾಧಿಕಾರಿ ಪೂಜ್ಯ ಶ್ರೀವೀರೇಂದ್ರ ಹೆಗಡೆಯವರು ಈ ಕಲ್ಮೇಶ್ವರ ದೇವಸ್ಥಾನವನ್ನ ಕಲ್ಲಿನಿಂದ ಕಟ್ಟಡದ ನಿರ್ಮಾಣಕ್ಕೆ ಎರಡು ಲಕ್ಷ 200000/- ರೂಗಳನ್ನು ಸಹಾಧನವಾಗಿ ನೀಡಿದ ಪ್ರಯುಕ್ತ ಕೊಪ್ಪಳ ಜಿಲ್ಲಾ ನಿರ್ದೇಶಕರು ಪ್ರಕಾಶ್‍ರಾವ್ ರವರು ಮಾತನಾಡಿ, ಇಂತಹ ಧಾರ್ಮಿಕ ಕಾರ್ಯಕ್ರಮವನ್ನು ಮಾಡಬೇಕು ಮತ್ತು ಆಸ್ತಿಕರು ದೇವರನ್ನ ನಂಬುತ್ತಾರೆ ನಾಸ್ತಿಕರು ದೇವರನ್ನ ನಂಬದೆ ಇರಬಹುದು ಆದ್ದರಿಂದ ಶ್ರಧ್ಧೆಯಿದ್ದಲ್ಲಿ ಸಂಸ್ಕಾರಗಳು ಇರುತ್ತದೆ ಜೀವನದಲ್ಲಿ ದೇವರಿರುವನೆಂಬ ನಂಬಿಕೆಯನ್ನ ಶ್ರದ್ಧಾಪೂರ್ವಕವಾಗಿ ಇದ್ದರೆ ಅದರಲ್ಲಿ ಸಫಲತೆಯ ಕಾಣುತ್ತೆವೆ ನಾವೇಲ್ಲ ಜೀವನದಲ್ಲಿ ಕಲಿಯಬೇಕಾದದು ಅವಶ್ಯಕ ಅಂತಾ ತಮ್ಮ ನುಡಿಗಳಲಿ ಹೇಳಿದರು ಮತ್ತು ಮೂಲ ಕಾರಣಿಕರ್ತುರಾದ ಶ್ರೀ ಗವಿಮಠದ ಅಭಿನವ ಗವಿಸಿಧ್ಧೇಶ್ವರವರು ಆಶೀರ್ವಾದಿಸಿದ್ದನ್ನು ನೆನೆಸುತ್ತಾ ಈ ಸಮಿತಿಯವರು ಕಲ್ಲೇಶ್ವರನ ಮಂದಿರವನ್ನು ಕಲ್ಲೀನಿಂದಲೆ ಕಟ್ಟಿಸಿದ್ದು ಶ್ಲ್ಯಾಘನೀಯ ಮೆಚ್ಚುವಂತಹ ಕೆಲಸ ಮಾಡಿದ್ದು ಒಳ್ಳೇಯದು ಇಂಥಹ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳು ಒಂದಿಲ್ಲೊಂದು ಊರಲ್ಲಿ ಮಾಡುತ್ತಾ ಬಂದರೆ ಅದಕ್ಕೆ ನಂಬಿಕಯೇ ದೇವರು ಅದನ್ನ ಪ್ರತಿಯೊಬ್ಬರು ಪಾಲಿಸಿ ಕಲಿಯೋಣ ಅದರಲ್ಲಿ ತಾವುಗಳೆಲ್ಲ ಈ ಕಾರ್ಯವನ್ನ ರೂಪಿಸಿದ್ದು ಒಳ್ಳೇಯದು ಅಂತಾ ತಮ್ಮ ನುಡಿಗಳಲ್ಲಿ ಹೇಳಿದರು.

 ಶ್ರೀ ವೀರೆಂದ್ರ ಹೆಗಡೆಯವರು ಕೊಡಮಾಡಲ್ಪಟ್ಟ ಎರಡು ಲಕ್ಷ ರೂಪಾಯಿಯ ಹಣದ ಚಕ್ ನ್ನು ಕಾಣಿಕೆ ರೂಪದಲ್ಲಿ ಸಹಾಯಧನವಾಗಿ ಕೊಟ್ಟು ಅದನ್ನ ಅಧ್ಯಕ್ಷರಾದ ಬಿಜಿ ಜವಳಿ ನಿವೃತ್ತ ಪಾಂಶುಪಾಲರು ಕೆಆರ್ ಬೆಲ್ಲದ ಕಾಲೇಜ ಮುಂಡರಗಿ ಹಾಗು ಸದಸ್ಯರಿಗೆ ಕೊಟ್ಟರು ಹಾಗೂ ತಾಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಗಾಂವಕರ ಮತ್ತು ನಾಗರಾಜ ಅವರ ಸಿಬ್ಬಂದಿರವರಿಂದ ವರ್ಗದವರು ಕೊಡಮಾಡಿದ್ದರಿಂದ ಕಲ್ಮೇಶ್ವರನ ಸೇವಾ ಸಮೀತಿಯ ಅಧ್ಯಕ್ಷರಾದ ಬಿಜಿ ಜವಳಿ ಹಾಗೂ ಉಪಾಧ್ಯಕ್ಷರಾದ ಶರಣಪ್ಪ ಗದಗಿನ, ಅಂದಾನಪ್ಪ ಅಂಗಡಿ , ಚನ್ನಬಸಪ್ಪ ಬೆಲ್ಲದ, ಸಿದ್ರಾಮಪ್ಪ ಬೆಲ್ಲದ, ವಿರುಪಾಕ್ಷಪ್ಪ ಜಕ್ಕಲಿ, ಗಣ್ಯ ವ್ಯಕ್ತಿಗಳಾದ ಮುತ್ತಯ್ಯ ಕಳ್ಳಿಮಠ, ಶ್ರೀಮತಿ ನಿರ್ಮಲಾ ಅದ್ಯಕ್ಷಣಿಯರು ಇಟಗಿ ಗ್ರಾಮ ಪಂಚಾಯಿತಿ ಮತ್ತು ಸದಸ್ಯರು ಹಾಜರಿದ್ದು ಸದರಿಯವರ ಸಮ್ಮುಖದಲ್ಲಿ 200000/- ರೂಪಾಯಿ ಚಕ್ಕನ್ನು ಕೊಡಮಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಂತಪ್ಪ ಬೆಲ್ಲದ ನಿವೃತ್ತ ಎಎಸ್ ಐ ರವರೆಲ್ಲರೊಂದಿಗೆ ಗೌರವಾರ್ಪಣೆಯಾಗಿ ಪ್ರಕಾಶ್ ಹಾಗೂ ಸತೀಶ್ ಗಾಂವಕರ ಮತ್ತು ನಾಗರಾಜ ಇವರಿಗೆ ಸನ್ಮಾನಿಸಲಾಯಿತು. ಇಟಗಿ ಪಂಚಾಯತ್ ಅಧ್ಯಕ್ಷಣೀಯರಾದ ಶ್ರೀಮತಿ ನಿರ್ಮಲಾ ರವರಿಗೂ ಸಹ ಸನ್ಮಾನಿಸಲಾಯಿತು.ನಂತರ ಅಧ್ಯಕ್ಷರ ಮಾತನಾಡಿ, ಧರ್ಮಸ್ಥಳದ ಶ್ರೀ ಧರ್ಮಾಧಿಕಾರಿಗಳಿಗೆ ಅವರ ಗುಂಪಿನವರಿಗೆ ನೇರವಾಗಿ ಪರೋಕ್ಷವಾಗಿ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನ ತಿಳಿಸಿದರು ಮತ್ತು ಚನ್ನಬಸಪ್ಪ ಬೆಲ್ಲದ ಮುಖ್ಯ ಶಿಕ್ಷಕರು ಇವರು ವಂದನಾರ್ಪಣೆ ಸಲ್ಲಿಸುವದರ ಮೂಲಕ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!