ಕುಕನೂರು,: ಪಟ್ಟಣದಲ್ಲಿ ನೂತನವಾಗಿ ವಿಕಾಸ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ನ ಕುಕನೂರು ಶಾಖೆಯ ಪೂಜಾ ಸಮಾರಂಭ ನೆರವೇರಿತು.
ಬ್ಯಾಂಕಿನ ಅಧ್ಯಕ್ಷರಾದ ವಿಶ್ವನಾಥ ಹಿರೇಮಠ ಅವರು ತಮ್ಮ ಶಾಖೆಯ ಕುರಿತು ಮಾತನಾಡಿ, ವರ್ಷದ 365 ದಿನಗಳ ನಿರಂತರ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವ ದೇಶದ ಏಕೈಕ ಬ್ಯಾಂಕ್ ಇದಾಗಿದೆ. ಕಾಲು ಶತಮಾನ ಕಳೆದ ಬ್ಯಾಂಕ್ ಬೆಳ್ಳಿ ಹಬ್ಬದ ಸಂಭ್ರಮದ ಸಂದರ್ಭದಲ್ಲಿ ವಿಕಾಸ್ ಬ್ಯಾಂಕ್ ರಾಜ್ಯದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಎಂದು ರಾಜ್ಯದಲ್ಲೆಡೆದೆ ಗುರುತಿಸಲ್ಪಟ್ಟಿದೆ, ವಿದ್ಯಾರಣ್ಯರ ಪುಣ್ಯ ಭೂಮಿಯಾದ ಹೊಸಪೇಟೆಯಲ್ಲಿ ಗಟ್ಟಿಗೊಳ್ಳುತ್ತ, ಶಾಖೆಗಳ ಮೂಲಕ ರಾಜ್ಯಾದ್ಯಂತ ಪಸರಿಸುವ ನಿಟ್ಟಿನಲ್ಲಿ ಶಕ್ತಿಯುತವಾಗಿ ಬೆಳೆದಿದೆ ಎಂದು ಹೇಳಿದರಲ್ಲದೆ ಬರುವ ದಿನಗಳಲ್ಲಿ ಇನ್ನೂ ಅನೇಕ ಶಾಖೆ ತೆರೆದು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ಶದೇಶಕರಾದ ರಮೇಶ್ ಪುರೋಹಿತ, ವಿಕಾಸ, ವ್ಯವಸ್ಥಾಪಕರಾದ ಬಸವರಾಜ್ ದಿಬ್ಬದ, ಸುಷ್ಮಾ, ಗವಿಸಿದ್ದಪ್ಪ, ವಿರಬಸಯ್ಯ ಮೊದಲಾದವರು ಉಪಸ್ಥಿತರಿದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ