ಕುಕನೂರು,: ಪಟ್ಟಣದ ಮಹಾಮಾಯ ನಗರದ ನಿವಾಸಿಗಳು ನೂತನವಾಗಿ ನಿರ್ಮಿಸಿದ ಬನ್ನಿಕಟ್ಟೆ ಹಾಗೂ ನೂತನ ನಾಗದೇವತೆ ಮೂರ್ತಿಯ ಪ್ರತಿಷ್ಠಾಪನೆ
ಆಗಸ್ಟ್ 04 ರವಿವಾರ ಬೆಳಗ್ಗೆ ನಾಲ್ಕರಿಂದ ಆರು ಗಂಟೆಯ ಒಳಗೆ, ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.
ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸ್ಥಳೀಯ ಅನ್ನದಾನೀಶ್ವರ ಮಠದ ಶ್ರೀ ಮಹಾದೇವ ಸ್ವಾಮಿಜೀಗಳು ಉಪಸ್ಥಿತಿಯಲ್ಲಿ ಯಲಬುರ್ಗಾದ ಶ್ರೀಧರಮುರುಡಿ ಹಿರೇಮಠದ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮವು ದ್ಯಾಂಪುರ ವೃತ್ತದಲ್ಲಿರುವ ಶ್ರೀಮಂಜುನಾಥ ದೇವಸ್ಥಾನದಿಂದ ಮಹಾಮಾಯ ನಗರದ ಬನ್ನಿಕಟ್ಟಿಯವರೆಗೆ ಡೊಳ್ಳು, ಭಜನೆ, ಸುಮಂಗಲೆಯರ ಕುಂಭದ ಮೆರವಣಿಗೆಯೊಂದಿಗೆ ನಾಗದೇವತೆ ಮೂರ್ತಿಯು ಸಾಗಿ ಬರಲಿದೆ.ಪ್ರತಿಮೆಯ ವಸ್ತ್ರವಾಸ ಕೂಡ ನಡೆಯುವುದು. ಪ್ರಾಣ ಪ್ರತಿಷ್ಠಾಪನೆಯ ನಂತರದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗುವುದು.
ಈ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ನಗರ ನಿವಾಸಿಗಳು ಭಾಗಿಯಾಗಲು ಮಹಾಮಾಯಾ ನಗರದ ನಿವಾಸಿಗಳ ಪರವಾಗಿ ಬಸವರಾಜ ಉಪ್ಪಾರ ಕೋರಿದ್ದಾರೆ.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ