ಮಹಾಮಾಯ ದೇವಿ ರಥೋತ್ಸವಕ್ಕೆ ಕ್ಷಣ ಗಣನೆ ಆರಂಭ
ಬೆಳಗಿನಿಂದ ವಿಶೇಷ ಪೂಜೆ ಪಲ್ಲಕ್ಕಿ ಉತ್ಸವ
ಅಕ್ಷರಕ್ರಾಂತಿ ನ್ಯೂಸ್
ಕುಕನೂರು,: ಪಟ್ಟಣದ ಐತಿಹಾಸಿಕ ಮಹಾಮಾಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ಅ11 ರಂದು ಸಾಯಂಕಾಲ 4 ಗಂಟೆಗೆ ಜರುಗುವ ರಥೋತ್ಸವಕ್ಕೆ ಎಲ್ಲಾ ಸಿದ್ದತೆ ನಡೆಯುತ್ತಿದ್ದು ಇನ್ನೇನು ಕ್ಷಣ ಗಣನೆ ಆರಂಭವಾಗಿದೆ.
ಬೆಳಗ್ಗೆಯಿಂದ ಮಹಾಮಾಯ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ ಪೂಜಾ ವಿಧಿ ವಿಧಾನಗಳು ನೆರವೇರುತ್ತಿವೆ.
ಮಹಾಮಾಯ ದೇವಸ್ಥಾನದಿಂದ ಪಾದಗಟ್ಟಿಯವರೆಗೂ ಮಹಾಮಾಯ ದೇವಿಯ ಪಲ್ಲಕ್ಕಿ ಸೇವೆ ಹಾಗೂ ರಥೋತ್ಸವ ಪೂಜಾ ವಿಧಾನಗಳು ಜರುಗುತ್ತಿದ್ದು, ರಥೋತ್ಸವಕ್ಕೆ ಪಟ್ಟಣದ ಹಿಂದೂ ಮಹಾ ಮಂಡಳಿಯಿಂದ ರುದ್ರಾಕ್ಷಿ ಮಾಲೆಯನ್ನು ರಥೋತ್ಸವಕ್ಕೆ ಅರ್ಪಿಸಲಾಯಿತು.ರಥೋತ್ಸವಕ್ಕೆ ನಾಡಿನ ಹಲವಾರು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ಆಗಮವಾಗುತ್ತಿರುವುದು ಕಂಡು ಬಂತು.
ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಉಪಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಭಕ್ತರಿಗೆ ತಂಗಲು ವ್ಯವಸ್ಥೆಯನ್ನು ದೇವಸ್ಥಾನ ಮಂಡಳಿಯವರು ಅಚ್ಚುಕಟ್ಟಾಗಿ ನೆರವೇರಿಸುತ್ತಿರುವದನ್ನು ಶಿಗ್ಗಾಂವ ಭಕ್ತರು ಸ್ಮರಿಸೀದ್ದಲ್ಲದೇ, ವಿಶೇಷವಾಗಿ ಗ್ರಾಮದವರ ಸಹಕಾರ ಹಾಗೂ ಪೋಲಿಸ್ ಇಲಾಖೆಯವರು ದೇವಸ್ಥಾನದವರೆಗೆ ಯಾವುದೇ ವಾಹನಗಳನ್ನು ಬಿಡದೇ ನಿಷೇಧ ಪಡಿಸಿದ್ದು ಭಕ್ತಾಧಿಗಳ ಸುಗಮ ಸಂಚಾರಕ್ಕೆ ಅನೂಕೂಲ ಕಲ್ಪಿಸಿದ್ದಾರೆ ಎಂದರು.ಜಾತ್ರಾ ಮಹೋತ್ಸವಕ್ಕಾಗಿ ಅಲ್ಲಲ್ಲಿ ವಿಶೇಷವಾಗಿ ಕಟ್ಟೆಚ್ಚರ ವಹಿಸುವಂತೆ 30-35 ಪೋಲಿಸ್ ಪೇದೆಗಳು, 20-25 ಗೃಹ ರಕ್ಷಕದಳ,10 ಸಂಚಾರಿ ಪೋಲಿಸ್ ನವರನ್ನು ಕುಕನೂರು ಠಾಣಾ ಪಿಐ ಟಿ. ಗುರುರಾಜ ನಿಯೋಜನೆಗೊಳಿಸಿರುವುದಲ್ಲದೇ ದೇವಸ್ಥಾನದಲ್ಲಿ ಎಡೆ ಬಿಡದೇ ಅವರು ಸರ್ಪಗಾವಲಾಗಿರುವುದು ಕಂಡು ಬಂದಿತು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ