ಯೋಗವು ದೇಹ, ಮನಸ್ಸು ಮತ್ತು ಆತ್ಮವನ್ನು ಪ್ರಕೃತಿಯೋಂದಿಗೆ ಮಿಲನ ಮಾಡುವ ಪ್ರಕ್ರಿಯೆ
ಕುಕನೂರ,: ತಾಲೂಕಿನ ಭಾನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಳಬಾಳ ಗ್ರಾಮದ ಅಮೃತ ಸರೋವರಗಳ ದಡದ ಮೇಲೆ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕುಕನೂರ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬಿರಾದರ್ ಪಾಟೀಲ್ ಸಸಿಗೆ ನೀರು ಹಾಕುವ ಮೂಲಕ ಉಧ್ಘಾಟಿಸಿದರು.
ನಂತರ ಮಾತನಾಡಿದ ಅವರು, ಯೋಗವು ಅಂತ್ಯಂತ ಪುರಾತನವಾಗಿದ್ದು, ಹಲವಾರು ಜ್ಞಾನಿಗಳು ಅದರ ಮಹತ್ವವನ್ನು ತಿಳಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೋಗ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರಿಂದ ವಿಶ್ವಾದ್ಯಂತ ಇದರ ಪ್ರಯೋಜನವನ್ನು ಎಲ್ಲರೂ ಪಡೆಯುತ್ತಿದ್ದೇವೆ.
ಭಾರತೀಯರಾದ ನಾವು ಹೆಮ್ಮೆ ಪಡಬೇಕಾದ ವಿಷಯ, ಅಲ್ಲದೇ ಮಹಿಳಾ ಸಬಲೀಕರಣವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರದ ಹಲವಾರು ಗ್ಯಾರಂಟಿ ಯೋಜನೆಗಳನ್ನು ಮತ್ತು ಗ್ರಾಮ ಪಂಚಾಯತಿಯಿಂದ ಸಂಜೀವಿನಿ ಜಿ.ಪಿ.ಎಲ್.ಎಫ್ ಸಂಘದ ಮೂಲಕ ಲಕ್ಷಾಂತರ ಹಣವನ್ನು ನೀಡಿ ಮಹಿಳೆಯರನ್ನು ಸಬಲೀಕರಣ ಮಾಡಲಾಗುತ್ತಿದೆ. ಮಹಿಳೆಯರು, ಗ್ರಾಮಸ್ಥರು ಎಲ್ಲರೂ ಸಹ ಪ್ರತಿನಿತ್ಯ ಯೋಗ ಮಾಡಿ ಆರೋಗ್ಯವಾಗಿರಿ ಎಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ತಿಮ್ಮಾರಡ್ಡಿ ಮಾತನಾಡಿ, ಯೋಗದ ವಿವಿಧ ಭಂಗಿಗಳು, ಸೂರ್ಯ ನಮಸ್ಕಾರ, ಕಪಾಲಭಾತಿ, ಪ್ರಾಣಾಯಾಮ ಸೇರಿದದಂತೆ ವಿವಿಧ ಆಸನಗಳನ್ನು ಮಕ್ಕಳಿಗೆ ಹೇಳಿಕೊಟ್ಟರು.
ಕಾರ್ಯನಿರ್ವಾಹಕ ಅಧಿಕಾರಿಗಳು ತಾವೂ ಸಹ ಯೋಗ ಮಾಡಿ ಮಕ್ಕಳಿಗೆ ಪ್ರೇರಣೆ ನೀಡಿದರು
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಾದ ದೇವಿಂದ್ರಪ್ಪ ಕಮ್ಮಾರ, ಮಲ್ಲಣ್ಣ ಸಾದರ್, ಗ್ರಾಮಸ್ಥರಾದ ಮರ್ದಾನ್ ಸಾಬ್, ಶರಣಯ್ಯ ಕಲ್ಗುಡಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸವಿತಾ ಪಾಟೀಲ್, ಪ್ರತಿಭಾ, ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ