ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ
Here you can find best replica watches uk.
ಅಕ್ಷರಕ್ರಾಂತಿ ನ್ಯೂಸ್
ಕುಕನೂರ,: ಇತ್ತೀಚಿನ ದಿನಗಳಲ್ಲಿ ದಸರಾ ಹಬ್ಬವು ಅತ್ಯಂತ ಮಹತ್ವವನ್ನು ಪಡೆದುಕೊಂಡಿದ್ದು ಅದರಂತೆ ಇಂದು ದಸರಾ ನಿಮಿತ್ಯ ಬೇರೆ ಬೇರೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಸಂತಸ ತಂದಿದೆ ಎಂದು ಶಿಕ್ಷಕ ದೇವಪ್ಪ ಪೂಜಾರ ಹೇಳಿದರು.
ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಛಲವಾದಿ ಮಹಾಸಭಾ ಗ್ರಾಮ ಘಟಕ(ರಿ) ಹಾಗೂ ಶ್ರೀ ದುರ್ಗಾದೇವಿ ಸೇವಾ ಸಮಿತಿಯಿಂದ ದಸರಾ ನಿಮಿತ್ಯ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಮ್ಮ ಸಮಾಜದವರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಶಾಲೆ ಬಿಡಿಸಿ ಯಾರು ಮಕ್ಕಳನ್ನು ದುಡಿಮೆಗೆ ಕಳಿಸಬಾರದು ಅಂದಾಗ ಮಾತ್ರ ನಾವು ಇತರರಂತೆ ಮುಂದೆ ಬರಲು ಸಾಧ್ಯವಾಗುತ್ತದೆ ಎಂದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕ ದೇವಪ್ಪ ಕಾಳಿ ನಾನು ಅತ್ಯಂತ ಬಡತನದಲ್ಲಿ ಓದಿ ಶಿಕ್ಷಕ ವೃತ್ತಿ ಪಡೆದವನು ಇಗ ಇರುವಂತಹ ಯಾವ ಸೌಲಭ್ಯಗಳು ಆಗಿನ ಕಾಲದಲ್ಲಿ ಇರಲಿಲ್ಲ ಇಗ ಸರಕಾರ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಅದರ ಸದುಪಯೋಗ ಪಡೆದು ವಿದ್ಯಾವಂತರಾಗಿ ಎಂದರು.ಮಾಜಿ ಗ್ರಾಪಂ ಸದಸ್ಯ ಅಡಿವೆಪ್ಪ ಛಲವಾದಿ ಮಾತನಾಡಿ, ಸಮಾಜದ ಹತ್ತನೇ ಹಾಗೂ ದ್ವೀತಿಯ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗಿದೆ ಹಾಗೂ ರಂಗೋಲಿ ಸ್ಪರ್ದೆ. ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಗಿದೆ. ಪ್ರತಿವರ್ಷ ದಸರಾ ನಿಮಿತ್ಯ ಇಂತಹ ಕಾರ್ಯಗಳನ್ನು ಮಾಡುತ್ತಿರುವದು ಒಳ್ಳೆಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಗ್ರಾಮ ಘಟಕದ ಅಧ್ಯಕ್ಷ ರವಿ ಛಲವಾದಿ, ಮುಖಂಡರಾದ ದೇವಪ್ಪ ದೊಡ್ಡಮನಿ. ಬಸವರಾಜ ಛಲವಾದಿ. ಪ್ರಭಾಕರ ಛಲವಾದಿ. ರಾಜೇಶ ಕಾಳಿ. ಸದ್ದಾಂ ಸಂಕನೂರ. ಭರಮಪ್ಪ ಪೂಜಾರ.ಮಲ್ಲಪ್ಪ ಕಾಳಿ. ಬಸವರಾಜ ದೊಡ್ಡಮನಿ. ಪ್ರಕಾಶ ಕಾಳಿ. ಸುರೇಶ ಪೂಜಾರ.ಉಲ್ಲಾಸ ಛಲವಾದಿ. ಸೇರಿದಂತೆ ಅನೇಕರು ಹಾಜರಿದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ಸಾಂಗವಾಗಿ ಜರುಗಿದ ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ