ವಿಶ್ವ ಬಂಧು ಸೇವಾ ಗುರುಬಳಗದ ಕಾರ್ಯಕ್ರಮ
ಕುಕನೂರು,: ಗೋಡೆ ಬರಹಗಳು ಸರಕಾರಿ ಶಾಲೆಗಳ ಮಕ್ಕಳಿಗೆ ಆಕರ್ಷಣಿಯ ಮತ್ತು ಹೆಚ್ಚಿನ ಜ್ಞಾನಕ್ಕೆ ಸಹಕಾರಿ ಎಂದು ತಿಪ್ಪರಸನಾಳ ಶಾಲೆಯ ಮುಖ್ಯ ಗುರುಗಳು ಹಾಗೂ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಮಹೇಶ ಸಬರದ ಹೇಳಿದರು.
ತಾಲೂಕಿನ ವಿಶ್ವ ಬಂಧು ಸೇವಾ ಗುರುಬಳಗದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತಿಪ್ಪರಸನಾಳ ಶಾಲೆಯಲ್ಲಿ ಗೋಡೆ ಬರಹ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋಡೆ ಬರಹಗಳು ಹೆಚ್ಚಿನ ವಿಷಯಗಳನ್ನು ಒಳಗೊಂಡು, ಪ್ರೇರಣಾತ್ಮಕ ನುಡಿಗಳಿರುವ ಬರಹ ಮಾಡುತ್ತಿರುವ ವಿಶ್ವ ಬಂಧು ಸೇವಾ ಗುರುಬಳಗದ ಕಾರ್ಯ ಶ್ಲಾಘನೀಯ ಎಂದರು.
ಈ ಸಮಯದಲ್ಲಿ ವಿಶ್ವ ಬಂಧು ಸೇವಾ ಗುರು ಬಳಗದ ಮುಖ್ಯಸ್ಥರಾದ ಸಿದ್ದಲಿಂಗಪ್ಪ ಶ್ಯಾಗೋಟಿ, ಶಿಕ್ಷಕರಾದ ಎಸ್ ವಿ ಧರಣಾ, ಮಾರುತೇಶ ತಳವಾರ, ವೀರಣ್ಣ ಮೆಣಸಿನಕಾಯಿ, ಸುರೇಶ ಮಡಿವಾಳರ, ಚಂದ್ರಪ್ಪ ರಾಜೂರ, ಬಸವರಾಜ ಹವಳೆ, ವೀರೇಶ ಮ್ಯಾಗಳೇಶಿ, ಖಾಜಾಸಾಬ್ ಹೊಸಳ್ಳಿ, ವೀರಭದ್ರಪ್ಪ ಕಮ್ಮಾರ, ಮಲ್ಲಿಕಾರ್ಜುನ ಕುಂಬಾರ, ಶಿವಕುಮಾರ ಹೊಂಬಳ, ಬಸವರಾಜ ಮುಳಗುಂದ, ಶರಣಪ್ಪ ಆರ್, ಹನುಮಂತಪ್ಪ ಬಿನ್ನಾಳ, ಮಂಜುನಾಥ ಮನ್ನಾಪೂರ, ಮಂಜುನಾಥಯ್ಯ ಟಿ,ಬಸುವರಾಜ ಸಾರಂಗಮಠ, ಮಲ್ಲಪ್ಪ ಪಟ್ಟೇದ, ಶಿವಪ್ಪ ಕರಿಯಣ್ಣವರ, ಸೋಮಣ್ಣ, ಕೊಟ್ರೇಶ್ ಪಠಾಣ್, ಮರ್ತುಜಾಸಾಬ ಮುಜಾವರ, ಸಿದ್ರಾಮಪ್ಪ ಟಿ, ಮಹಾವೀರ ಕಲಭಾವಿ, ಶಂಭು ಅರಿಶಿಣದ, ಶಿವಕುಮಾರ ಮುತ್ತಾಳ, ಸೇವಾ ಗುರು ಬಳಗದ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.
*******************************************
*******************************************
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ