ಕುಕನೂರು ,: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ 5 ವಾಣಿಜ್ಯ ಮಳಿಗೆಗಳ ಟೆಂಡರ್ ಕಂ. ಬಹಿರಂಗ ಹರಾಜು ಪ್ರಕ್ರಿಯೇ ದಿ.25.07.24ರ ಗುರುವಾರ ದಂದು ಜರುಗಿತು.
ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿ ಗುರುರಾಜ ಎಸ್. ಗುಡಿಯವರ ಸಮ್ಮಖದಲ್ಲಿ ಬೆಳಗ್ಗೆ 11.30ಕ್ಕೆ ಪ್ರಾರಂಭವಾದ ಹರಾಜು ಪ್ರಕ್ರೀಯೇಯಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಈಗಿರುವ ವ್ಯಾಪಾರಸ್ಥರು ಸೇರಿದಂತೆ, ವಿವಿಧ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಒಟ್ಟು ಆರು ಮಳಿಗೆಯ ಹರಾಜು ಪ್ರಕ್ರೀಯೇ 5 ವರ್ಷದ ಅವಧಿಗೆ ನಡೆಯಿತು.
ಮಳಿಗೆ ಸಂಖ್ಯೆ 3, ಕೇವಲ ಒಬ್ಬರೇ ಭಾಗವಹಿಸಿದ್ದು ಸಮಿತಿಯ ತಿಂಗಳು ನಿಗದಿ ದರ 4382 ಆಗಿದ್ದರೇ 4500ರೂ ಗಳಿಗೆ ಅಂದಾನಗೌಡ ಇವರಿಗೆ ಹರಾಜು ಹಂಚಿಕೆಯಾಯಿತು.
ಇದರಂತೆ ಮಳಿಗೆ ಸಂಖ್ಯೆ 4ಕ್ಕೆ ಇಬ್ಬರು ಭಾಗವಹಿಸಿದ್ದು, ಸಮಿತಿಯ ತಿಂಗಳು ನಿಗದಿ ದರ 4382 ರೂ. ಆಗಿದ್ದರೇ 7100 ರೂಗಳಿಗೆ ತೋಟಯ್ಯ ಶಸಿಮಠ ಇವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 5ಕ್ಕೆ ಐದು ಜನ ಭಾಗವಹಿಸಿದ್ದು, ಸಮಿತಿಯ ನಿಗದಿ ದರ 4431ರೂ ಆಗಿದ್ದರೇ, 11500ರೂಪಾಯಿಗಳಿಗೆ ಕನಕಪ್ಪ ಬ್ಯಾಡರ್ ಇವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 6 ಎಸ್ ಸಿ ಮೀಸಲಿದ್ದು, ಇದರಲ್ಲಿ 5 ಜನ ಭಾಗವಹಿಸಿದ್ದು ಸಮಿತಿಯ ನಿಗದಿ ದರ 4431ರೂ.ಆಗಿದ್ದರೇ 9500 ರೂಗಳಿಗೆ ಪರಶುರಾಮ ಅಂಬಲಿಯವರಿಗೆ ಹಂಚಿಕೆಯಾಯಿತು.
ಮಳಿಗೆ ಸಂಖ್ಯೆ 7ಕ್ಕೆ 3 ಜನ ಭಾಗವಹಿಸಿದ್ದು ಸಮಿತಿಯ ನಿಗದಿ ದರ 4431ಆಗಿದ್ದರೇ, 8800ರೂಗೆ ಮಹ್ಮದ್ ಮುಸ್ತಫ್ ಸಂಗಟಿಯವರಿಗೆ ಹಂಚಿಕೆಯಾಯಿತು.
ಎರಡನೇಯ 5ರ ಮಳಿಗೆ ಸಂಖ್ಯೆಗೆ 5 ಜನ ಭಾಗವಹಿಸಿದ್ದು ಸಮಿತಿಯ ನಿಗದಿ 4016 ರೂ ಆಗಿದ್ದರೇ 10000ರೂಗಳಿಗೆ ಪ್ರಕಾಶ ದಿವಟರ್ ಇವರಿಗೆ ಹಂಚಿಕೆಯಾಯಿತು.
ಈ ಬಹಿರಂಗ ಹರಾಜು ಪ್ರಕ್ರಿಯೇಯಲ್ಲಿ ಭಾಗವಹಿಸಿದ ಎಲ್ಲರಿಗೂ ಮಾರುಕಟ್ಟೆಯ ಮೇಲ್ವಿಚಾರಕ ಶ್ರೀಸಿಂಗ್ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಿಬ್ಬಂದಿಯ ಶಶಿಧರ, ಸುಭಾಸ, ಶಿವಬಸವಸ್ವಾಮಿ, ಶರಣಮ್ಮ ದಿವಟರ್ ಇನ್ನಿತರ ವ್ಯಾಪಾರಸ್ಥರು ಇದ್ದರು.
More Stories
ದೌರ್ಬಲ್ಯ ತೊರೆದು ಆದಿಕವಿಯಾದ ವಾಲ್ಮೀಕಿ : ಕುಲಪತಿ ಪ್ರೊ.ಬಿ.ಕೆ ರವಿ
ಸ್ಕ್ಯಾನ್ ಮಾಡಿ ನರೇಗಾ ಕಾಮಗಾರಿ ಬೇಡಿಕೆ ಸಲ್ಲಿಸಿ : ವೈಜನಾಥ ಸಾರಂಗಮಠ
ದಸರಾ ನಿಮಿತ್ಯ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿ