December 23, 2024

AKSHARA KRAANTI

AKSHARA KRAANTI




ಆರೋಗ್ಯ ಕಾಲೋನಿಯಲ್ಲಿ ಅನಾರೋಗ್ಯ ವಾತಾವರಣ

ಆರೋಗ್ಯ ಕಾಲೋನಿಯಲ್ಲಿ ಸ್ವಚ್ಚತೆ ಮರಿಚೀಕೆ

ಕುಕನೂರ,: ಸರಕಾರ ಗ್ರಾಮೀಣ ಪ್ರದೇಶದ ಸ್ವಚ್ಚತೆ ಹಾಗೂ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳನ್ನ ಖರ್ಚು ಮಾಡುತ್ತಿದೆ. ಆದರೆ, ಗ್ರಾಮಗಳಲ್ಲಿ ಬಂದು ನೋಡಿದಾಗ ತಿಳಿಯುತ್ತದೆ ಸ್ವಚ್ಚ ಭಾರತ ಕನಸು ಇನ್ನೂ ನನಸಾಗದೆ ಉಳಿದಿರುವದು ಮಾತ್ರ ಬಹುದೊಡ್ಡ ದುರಂತವೇ ಸರಿ.

ಹೌದು, ಕುಕನೂರು ತಾಲೂಕಿನ ಮಂಗಳೂರ ಗ್ರಾಮ ಪಂಚಾಯತಿ ವ್ಯಾಪ್ತಿಯ 6ನೇ ವಾರ್ಡನ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಮುಂದೆ ತ್ಯಾಜ್ಯ ತುಂಬಿದ ಕಲುಷಿತ ನೀರು ಸಂಗ್ರಹವಾಗಿ ದುರ್ನಾತ ಪ್ರಾರಂಭವಾಗಿದೆ. ವಿಚಿತ್ರ ಸಂಗತಿ ಏನೆಂದರೆ ಇಲ್ಲಿ ಆರೋಗ್ಯ ಸಿಬ್ಬಂದಿಗಳು ವಾಸಿಸುವ ವಸತಿ ಗೃಹಗಳು ಇದ್ದುದ್ದರಿಂದ ಅವರು ಗ್ರಾಮದಲ್ಲಿ ಸಾರ್ವಜನಿಕರಿಗೆ ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ಹೇಳಿಕೊಳ್ಳುವುದಕ್ಕೆ ಮುಜುಗರ ಪಡುವಂತಾಗಿದೆ.

ಆರೋಗ್ಯದ ಬಗ್ಗೆ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ನಮಗೆ ಅದೇ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸುಮಾರು ದಿನಗಳಿಂದ ಕೊಳಕು ನೀರು ಸಂಗ್ರಹವಾಗಿ ಸುತ್ತಮುತ್ತಲಿನ ಸಿಬ್ಬಂದಿಗಳಿಗೆ ದುರ್ನಾತ ಸೇವಿಸುವ ದೌರ್ಭಾಗ್ಯ ಒದಗಿಬಂದಂತಾಗಿದೆ. ಗ್ರಾ.ಪಂ. ಅಧ್ಯಕ್ಷ ಮತ್ತು ವಾರ್ಡ ಸದಸ್ಯರಿಗೆ ಸ್ವಚ್ಚತೆ ಮಾಡಲು ಮೌಖಿಕವಾಗಿ ಸಮಸ್ಯೆ ಬಗೆಹರಿಸಲು ವಿನಂತಿಸಿಕೊಂಡಿದ್ದರು, ಇನ್ನೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಸಮಾದಾನ ವ್ಯಕ್ತವಾಗಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅಲ್ಲಿಯ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಒಂದು ವೇಳೆ ಸಂಬಂದಿಸಿದ ಅಧಿಕಾರಿಗಳು ಹಾಗೂ ಗ್ರಾಪಂ ಅಧಿಕಾರಿಗಳು ಶ್ರೀಘ್ರವಾಗಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸದೆ ಇದ್ದರೆ ಇಲ್ಲಿಯ ನಿವಾಸಿಗಳು ಎಲ್ಲರೂ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಆಗ್ರಹಿಸಿದ್ದಾರೆ.

ವರದಿ: ದುರಗೇಶ ಪೂಜಾರ

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!