December 23, 2024

AKSHARA KRAANTI

AKSHARA KRAANTI




ಅಗ್ನಿ ಅವಘಡ : ಕಂಬಳಿಯವರಿಂದ ಪರಿಹಾರ ವಿತರಣೆ

ಕುಕನೂರು,: ಪಟ್ಟಣದ 1ನೇ ವಾರ್ಡ್ ನ ಬಡ ಅಂಗವಿಕಲರಾದ ಮಲಿಯಪ್ಪ ಬಳ್ಳಾರಿ ಎನ್ನುವವರ ಟೀ ಅಂಗಡಿ ಶನಿವಾರ ದಂದು ತಡರಾತ್ರಿ ಅಗ್ನಿ ಅವಘಡಕ್ಕೆ ಸಿಲುಕಿದ್ದು ಸುಮಾರು ಅಂದಾಜು 50ರಿಂದ 60 ಸಾವಿರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ.

ಘಟನಾ ಸ್ಥಳಕ್ಕೆ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕಳಕಪ್ಪ ಕಂಬಳಿ ಧಾವಿಸಿ ದಂಪತಿಗಳ ಯೋಗ ಕ್ಷೇಮ ವಿಚಾರಿಸಿದರು. ನಂತರ ಧೈರ್ಯ ತುಂಬಿ ಕೈಲಾದ ಧನ ಸಹಾಯ ಮಾಡಿದರು.
ನಂತರ ಈ ಕುರಿತು ಕುಕನೂರು ತಹಶೀಲ್ದಾರರ ಗಮನಕ್ಕೆ ತಂದು ಸರಕಾರದಿಂದ ಸಹಾಯ ನೀಡುವಂತೆ ಕೋರಿದರು.

ಈ ಸಂದರ್ಭದಲ್ಲಿ ವೀರಯ್ಯ ದಳಪತಿ ,ಪರಶು, ಸಿದ್ದು , ಪಟ್ಟಣ ಪಂಚಾಯತಿ ಸದಸ್ಯ ಪ್ರೇಮ ಕುಮಾರ ಮಾಲಗಿತ್ತಿ ಮುಂತಾದವರು ಇದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!