ಕನಕಗಿರಿ,: ಮೋದಿ ಅವರ ಅನೇಕ ಜನಪರ ಕಾರ್ಯಗಳಿಗೆ ಈಗಾಗಲೇ ದೇಶವಾಸಿಗಳು ಬೆಂಬಲ ನೀಡುತ್ತಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಗೆದ್ದು ಮೋದಿ ಅವರಿಗೆ ಉಡುಗೊರೆ ನೀಡಬೇಕಾಗಿದೆ, ಪ್ರಮುಖರ ಹಾಗೂ ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿ ಕೊಪ್ಪಳ ಲೋಕಸಭೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಡಾ. ಬಸವರಾಜ ಕ್ಯಾವಟರ್ ಹೇಳಿದರು.
ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಮಹಾಶಕ್ತಿ ಕೇಂದ್ರಗಳ ಬಹಿರಂಗ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
2014ರವರೆಗೆ ಜಗತ್ತಿನ ಐದು ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತವನ್ನು ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಮುನ್ನಡೆಸಿದ ಶ್ರೇಯಸ್ಸು ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ್ದು. ಈ ಏಳಿಗೆಯು ಹೀಗೆಯೇ ಮುಂದುವರೆಯಬೇಕಾದರೆ 3ನೇ ಬಾರಿಗೆ ಬಿಜೆಪಿ ಬಹುಮತದಿಂದ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು. ಕಾರ್ಯಕರ್ತರು, ಮುಖಂಡರು ಒಮ್ಮತದಿಂದ ಬಿಜೆಪಿಯನ್ನು ಈ ಬಾರಿಯೂ ಗೆಲ್ಲಿಸುವುದಕ್ಕೆ ಶ್ರಮಿಸುವುದಾಗಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕರು, ಮಾಜಿ ಶಾಸಕರು, ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರು ಹಾಗೂ ಕಾರ್ಯಕರ್ತರು ಇದ್ದರು.
More Stories
ಕನಕಗಿರಿಯಲ್ಲಿ ಗಾಂಧಿಜೀ ಹಾಗೂ ಶಾಸ್ತ್ರಿಜೀ ರವರ ಜಯಂತಿ ಆಚರಣೆ
ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯ, ಕ್ರೀಡೆಯು ಅಷ್ಟೇ ಮುಖ್ಯ : ಡಾ. ಚನ್ನಮಲ್ಲ ಮಹಾಸ್ವಾಮಿಗಳು
371ಜೆ ಕಲಂ ಸೌಲಭ್ಯ ಸದುಪಯೋಗ ಪಡೆಯಿರಿ : ತಾ.ಪಂ ಇಓ ಕೆ.ರಾಜಶೇಖರ