December 23, 2024

AKSHARA KRAANTI

AKSHARA KRAANTI




ಕನಕಗಿರಿಯಲ್ಲಿ ಗಾಂಧಿಜೀ ಹಾಗೂ ಶಾಸ್ತ್ರಿಜೀ ರವರ ಜಯಂತಿ ಆಚರಣೆ

ಸರ್ಕಾರಿ ಹಾಗೂ ವಿವಿಧ ಪಕ್ಷದ ಕಚೇರಿಯಲ್ಲಿ ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಅಕ್ಷರಕ್ರಾಂತಿ ನ್ಯೂಸ್
ಕನಕಗಿರಿ,: ಪಟ್ಟಣದ ತಾಲೂಕು ಪಂಚಾಯತಿ ಕಚೇರಿಯಲ್ಲಿ ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ದೇಶದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಿಸಲಾಯಿತು.

ಈ ವೇಳೆ ಮಹಾನ್ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ತಾಲೂಕ್ ಆಡಳಿತ ಕಾರ್ಯಾಲಯ ಮತ್ತು ತಾ.ಪಂಚಯತ್ ಪಟ್ಟಣ ಪಂಚಾಯಿತಿಯಲ್ಲಿ ಕೂಡ ಆಚರಿಸಲಾಯಿತು ನಂತರ ತಾಲೂಕು ಆಡಳಿತ ಅಧಿಕಾರಿ ವಿಶ್ವನಾಥ್ ಮುರುಡಿ ಮಾತನಾಡಿ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿದ್ದ ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸಾ ಮಾರ್ಗದಲ್ಲಿಯೇ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ನಂತರ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಕ ಅಧಿಕಾರಿ ಕೆ.ರಾಜಶೇಖರ್ ಅವರು ನಮ್ಮ ದೇಶದ ಇನ್ನೋರ್ವ ಮಹಾನಾಯಕರಾದ ಮತ್ತು ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಈ ದೇಶಕ್ಕೆ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯ ನೀಡಿ ದೇಶದ ಪ್ರಗತಿಗೆ ಅತ್ಯಮೂಲ್ಯ ಉಡುಗೊರೆ ನೀಡುವದಲ್ಲದೇ ಅತ್ಯಂತ ಸ್ಪಷ್ಟ ಆಡಳಿತ ಕೊಟ್ಟಿದ್ದರು ಎಂದು ಸ್ಮರಿಸಿದರು.ಕಾಂಗ್ರೆಸ್ ಕಾರ್ಯಾಲಯದಲ್ಲಿ : ಮಹಾತ್ಮ ಗಾಂಧಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪೂಜ ಸಲ್ಲಿಸಿ ಗಾಂಧಿ ಗಾಂಧಿ ಭವನದಿಂದ ಜೈಕಾರವನ್ನು ಕೂಗುತ್ತಾ ಮೆರವಣಿಗೆ ಮುಖಾಂತರ ಕಾಂಗ್ರೆಸ್ ಕಾರ್ಯಾಲಯಕ್ಕೆ ಬಂದು ಅವರು ಮಾಡಿರುವಂತಹ ಹೋರಾಟ ತ್ಯಾಗ ಸತ್ಯಾಗ್ರಹಗಳ ಬಗ್ಗೆ ಎಲ್ಲರಲ್ಲಿಯೂ ಅಪಾರ ದೇಶಭಕ್ತಿ ಮೂಡಿಸಿರುವಂತಹ ಮಹಾ ನಾಯಕರನ್ನು ಸ್ಮರಣೆಗೈದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವೀರೇಶ್ ಸಂಗಂಡಿ ನಗರ ಘಟಕ ಅಧ್ಯಕ್ಷರಾದ ಆರ್‌ ಪಾಟೀಲ್ ಭತ್ತದ ಶರಣಪ್ಪ ನೀರ್ ಲೂಟಿ ಸಿದ್ದಪ್ಪ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಹುಸೇನ್ ಬಿ ಚಳ್ಳಮರದ್ ಉಪಾಧ್ಯಕ್ಷರಾದ ಕಂಠರಂಗನಾಯಕ್ ಮತ್ತು ಪಟ್ಟಣ ಪಂಚಾಯಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ನಾಗರಾಜ್ ಬೋಂಡಾಡಿ ಹನುಮೇಶ್ ವಾಲಿಕಾರ್ ಉಪಸ್ಥಿತರಿದ್ದರುಬಿಜೆಪಿ ಕಾರ್ಯಾಲಯದಲ್ಲಿ : ಮೊದಲ ಮಹಾಯುದ್ಧದ ನಂತರ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಜಕೀಯದಲ್ಲಿ ಅನೇಕ ಗುಣಾತ್ಮಕ ಬದಲಾವಣೆ ತಂದವರು ಮತ್ತು ಈ ಗುಣಾತ್ಮಕ ಬದಲಾವಣೆಯನ್ನು ಮಾಡಿದ ರಾಷ್ಟ್ರೀಯ ನಾಯಕರಲ್ಲಿ ಮಹಾತ್ಮ ಗಾಂಧಿಯವರು ನಾಯಕರಾಗಿದ್ದರು. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯದವರೆಗೂ ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ರಾಜಕೀಯದಲ್ಲಿ ಪ್ರಮುಖ ನಾಯಕರಾಗಿರುವಂತವರು ಇಂತಹ ಮಹಾನ್ ನೇತಾಜಿಯವರ 155ನೇ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ವಾಗೀಶ್ ಹಿರೇಮಠ, ಕನಕಗಿರಿ ಮಂಡಲ ಪ್ರ. ಕಾರ್ಯದರ್ಶಿ ಗ್ಯಾನಪ್ಪ ಗಾಣದಾಳ ಮತ್ತು ಪ್ರಕಾಶ ಹಾದಿಮನಿ, ಕನಕಗಿರಿ ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಮಹಾಂತೇಶ್ ಸಜ್ಜನ, ಜಿಲ್ಲಾ ಬಿಜೆಪಿ ಎಸ್.ಸಿ. ಮೊರ್ಚಾ ಜಿಲ್ಲಾಧ್ಯಕ್ಷರಾದ ಸಣ್ಣ ಕನಕಪ್ಪ, ಮಂಡಲ ಉಪಾಧ್ಯಕ್ಷರಾದ ರಂಗಪ್ಪ ಕೊರಗಟಗಿ, ಪಟ್ಟಣ ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ ಮತ್ತು ಹನುಮಂತ ಬಸರಿಗಿಡದ್ ಹಾಗೂ ಶೇಷಪ್ಪ ಪೂಜಾರ್, ಚಿಕ್ಕಮಾದಿನಾಳ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶಿವಾನಂದ ವಂಕಲಕುಂಟ, ಮುಖಂಡರಾದ ಹನುಮೇಶ್ ಯಲಬುರ್ಗಿ, ದೊಡ್ಡಬಸಪ್ಪ ಬತ್ತದ, ಲಿಂಗಪ್ಪ ಪೂಜಾರ, ವೆಂಕಟೇಶ್ ಸೌದ್ರಿ, ಅರುಣ್ ತಾತ,ಶಿವುಕುಮಾರ್ ಕೋರಿ, ಸುರೇಶ್ ಕುರುಗೋಡು, ವೆಂಕಟೇಶ್ ಪೂಜಾರ್, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ನಾಯಕ, ಎಸ್ ಸಿ ಮೊರ್ಚಾ ಅಧ್ಯಕ್ಷರಾದ ಸುಭಾಸ್ ಕಂದಕೂರ್, ಒಬಿಸಿ ಮೊರ್ಚಾ ಅಧ್ಯಕ್ಷರಾದ ಹರೀಶ ಪೂಜಾರ್,ಹಾಗೂ ಇನ್ನೂ ಅನೇಕರು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 81520 17754
error: Content is protected !!